ನಲ್ಲಿಕಾಯಿ ನಂತರದ ಸಿಹಿ

ಪರಿಚಯ

ನಲ್ಲಿಕಾಯಿ ಪಾಡ್ಕ್ಯಾಸ್ಟ್ನಲ್ಲಿ ಕೇವಲ ಧ್ವನಿ ಕೇಳುವ ಅವಕಾಶ ಇತ್ತು, ಆದರೆ ನಲ್ಲಿಕಾಯಿ ಅಂಗಳದಲ್ಲಿ ಬರಹಗಳನ್ನೂ ಓದಬಹುದು.

ನಾನಿಲ್ಲಿ ಬಳಸಿರುವ layout ಓದುಗರಿಗೆ ಸ್ವಲ್ಪವೂ ತೊಂದರೆ ಆಗಬಾರದು ಅನ್ನೋ ಉದ್ದೆಶದಿಂದ ಮಾಡಿರೋದು. ಹಾಗಾಗಿ ನಿಮಗೆ ಯಾವುದೇ distractions ಕಾಣಸಿಗೋದಿಲ್ಲ. ಈಗಿನ generation ಓದೋದೆ ಕಡಿಮೆ, ಅದ್ರಲ್ಲೂ ಏನಾದ್ರೂ distractions ಇದ್ರೆ ಮುಗೀತು. ಇದನ್ನ web designers ಭಾಷೇಲಿ minimalism (ಕನಿಷ್ಠೀಯತೆ) ಅಂಥ ಕರೀತಾರೆ. ಆಮೇಲೆ, ನಮ್ಮ ಬ್ಲಾಗ್‍ ಓದುವಾಗ ಪುಸ್ತಕ ಓದಿದ ಅನುಭವ ಆಗ್ಬೇಕು ಅನ್ನೋ ಇನ್ನೊಂದು ಉದ್ದೇಶಕ್ಕೆ ಇಲ್ಲಿ ಯಾವುದೇ ಅಲಂಕಾರ ಬಳಸಿಲ್ಲ.

ಒಬ್ಬ web designer ಆಗಿ ಇವೆಲ್ಲ ನಾನು ತಿಳಿದಿರಲೇ ಬೇಕಾದುವು. ನೀವು ಇದನ್ನ ನಿಮ್ಮ mobile ಅಥವಾ tablet ನಲ್ಲಿ ಒದುತ್ತಿದ್ದರೆ ನಿಮ್ಗೆ ನಮ್ಮ ಬ್ಲಾಗ್ ಓದುವ ಮಜ ಗೊತ್ತಾಗತ್ತೆ. ಕನ್ನಡ font ಗಳು website ಗಳಿಗೆ ಅಷ್ಟು ಚೆನ್ನಾಗಿ ಒಗ್ಗುವುದಿಲ್ಲವಾದರೂ ನಮ್ಮ ಬ್ಲಾಗ್‍ನಲ್ಲಿ ಎಷ್ಟು ಅಂದವಾಗಿ ಕಾಣ್ಸತ್ತೆ ಅಲ್ವಾ?

ನಿಮ್ಗೂ ನಿಮ್ಮ ಬ್ಲಾಗ್ post ನಮ್ಮ ಬ್ಲಾಗ್‍ನಲ್ಲಿ ಕಾಣಿಸಬೇಕು ಅನ್ನೋ ಆಸೆ ಇದ್ರೆ, ದಯವಿಟ್ಟು submit ಮಾಡಿ. ತಕ್ಷಣ ಅಲ್ದೇ ಇದ್ರೂ, ನಿದಾನಕ್ಕೆ post ಮಾಡ್ತೀನಿ.

ಇದು ಲಾಭರಹಿತ ಹಾಗೂ ಕನ್ನಡಕ್ಕಾಗಿ ಮಾಡುತ್ತಿರುವ ಕೆಲಸ ಆಗಿರೋದ್ರಂದ ಯಾವುದೇ ಸಂಭಾವನೆಯನ್ನ ಇಚ್ಚಿಸಬೇಡಿ. ನಾನು ಬಹಳ ಸಮಯ, ಮುತುವರ್ಜಿವಹಿಸಿ ಮಾಡಿರುವ ಬ್ಲಾಗ್ ಇದು. ನನಗೆ ಸಹಾಯ ಮಾಡೋ ಉದ್ದೇಶ ಇದ್ರೆ ದಯವಿಟ್ಟು ತಿಳಿಸಿ ಅಥವಾ ನಿಮಗೂ ಈ ಥರದ blog, website, portfolio ಏನಾದ್ರು ಬೇಕಾಗಿದ್ದಲ್ಲಿ ನನ್ನನ್ನ ಇಲ್ಲಿ ಸಂಪರ್ಕಿಸಿ. ಸ್ವಲ್ಪ ಕಡಿಮೆಗೆ ಮಾಡ್ಕೊಡಣ :)

webjeda